ನಮ್ಮ ಬಗ್ಗೆ

ಕರ್ನಾಟಕ ಅಭಿವೃದ್ಧಿಗೆ ಒಂದು ದೃಷ್ಠಿಕೋನ.

 

ಓಂ ಸರ್ವೇ ಭವಂತು ಸುಖಿನಃ| ಸರ್ವೇ ಸಂತು ನಿರಾಮಯಾಃ
ಸರ್ವೇ ಭದ್ರಾಣಿ ಪಶ್ಯಂತು| ಮಾ ಕಶ್ಚಿದ್ ದುಖಃ ಭಾಗ್ಭವೇತ್||

 

ಎಲ್ಲರೂ ಸುಖವಾಗಿರಲಿ
ಎಲ್ಲರೂ ಆರೋಗ್ಯವಾಗಿರಲಿ
ಎಲ್ಲರೂ ಒಳ್ಳೆಯದನ್ನೇ ನೋಡುವಂತಾಗಲಿ
ಯಾರಿಗೂ ದುಃಖವಾಗದಿರಲಿ

 

ಕರ್ನಾಟಕ ವಿಷನ್‌ 2020 ಪ್ರಮುಖ ಅಂಶಗಳು ಈ ಕೆಳಗಿನಂತಿವೆ.

 

 • ಎಲ್ಲಾ ನಾಗರಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳುವುದು ಮತ್ತು ಶಾಂತಿ ಮತ್ತು ಕೋಮು ಸಾಮರಸ್ಯವನ್ನು ಎತ್ತಿಹಿಡಿಯುವುದು.
 • ಎಲ್ಲಾ ಹಂತಗಳಲ್ಲಿ ಬಡತನ ಮತ್ತು ನಿರುಪಯುಕ್ತತೆಯನ್ನು ನಿವಾರಿಸಿ ಮಿಲೇನಿಯಮ್ ಅಭಿವೃದ್ಧಿ ಗುರಿಗಳನ್ನು ಸಾಧಿಸುವುದು.
 • ರಾಜ್ಯದಲ್ಲಿನ ಎಲ್ಲಾ ವಿಭಾಗಗಳು ಮತ್ತು ಪ್ರದೇಶಗಳನ್ನು ಒಳಗೊಂಡಂತೆ ಸರಿಯಾದ ಬೆಳವಣಿಗೆಯನ್ನು ಉತ್ತೇಜಿಸಲು ಮಾನವ ಸಾಮರ್ಥ್ಯಗಳನ್ನು ವರ್ಧಿಸುವುದು.
 • ಕರ್ನಾಟಕವನ್ನು ಜಾಗತಿಕವಾಗಿ ಸ್ಪರ್ಧಾತ್ಮಕ ತಾಣವಾಗಿ ಮಾಡುವುದು ಮತ್ತು ಭಾರತೀಯ ರಾಜ್ಯಗಳ ನೇತಾರನಾಗಿ ಮಾಡುವುದು.
 • ವರ್ಧಿತ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಭಾಗವಹಿಸುವಿಕೆಯ ಮೂಲಕ ರಾಜ್ಯದಾದ್ಯಂತ ಉತ್ತಮ ಆಡಳಿತವನ್ನು ಸ್ಥಾಪಿಸುವುದು.

 

ವಿಷನ್ ಸಾಧಿಸಲು ಪ್ರಸ್ತಾಪಿಸಿದ ಹನ್ನೆರಡು ಮಾರ್ಪಾಡುಗಳು ಕೆಳಗಿನಂತಿವೆ:

 

 • ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳ ಹೆಚ್ಚಿನ ಕಾರ್ಯಸಾಧ್ಯತೆಯ ಮೂಲಕ ಗ್ರಾಮೀಣ ಆದಾಯವನ್ನು ಹೆಚ್ಚಿಸುವುದು.
 • ಉದ್ಯೋಗಿಗಳಲ್ಲಿ ಸಂಯೋಜಿತ ಕೌಶಲ್ಯ ಅಭಿವೃದ್ಧಿ ಮೂಲಕ ಉದ್ಯೋಗ-ಆಧಾರಿತ ಬೆಳವಣಿಗೆಯ ಮೇಲೆ ಕೇಂದ್ರೀಕರಿಸುವುದು.
 • ರಾಜ್ಯವನ್ನು ರೋಮಾಂಚಕ ಜ್ಞಾನ ಸಮಾಜವಾಗಿ ಅಭಿವೃದ್ಧಿಪಡಿಸುವುದು.
 • ಎಲ್ಲರಿಗೂ ಗುಣಮಟ್ಟದ ಆರೋಗ್ಯದ ಲಭ್ಯತೆ ಮತ್ತು ಉಪಯೋಗವನ್ನು ಸುಧಾರಿಸುವುದು.
 • ಕೈಗಾರೀಕರಣ ಮತ್ತು ನಗರೀಕರಣದ ಸಮರ್ಥನೀಯ ಮತ್ತು ಕ್ರಮಬದ್ಧವಾದ ಪ್ರಕ್ರಿಯೆಯನ್ನು ಸಾಧಿಸುವುದು.
 • ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅವಕಾಶಗಳನ್ನು ವರ್ಧಿಸುವುದು ಮತ್ತು ಅಧಿಕಾರ ನೀಡುವುದು.
 • ಆರ್ಥಿಕತೆಯ ಉತ್ಪಾದಕ ಸಾಮರ್ಥ್ಯವನ್ನು ಹೆಚ್ಚಿಸಲು ಶಕ್ತಿ ಲಭ್ಯತೆಯನ್ನು ಸುಧಾರಿಸುವುದು ಮತ್ತು ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸುವುದು.
 • ಕರ್ನಾಟಕದ ಶ್ರೀಮಂತ ಪರಂಪರೆಯನ್ನು ಉಳಿಸುವುದು ಮತ್ತು ಉತ್ತೇಜಿಸುವುದು.
 • ರಾಜ್ಯ ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಮರ್ಥನೀಯತೆಯನ್ನು ಖಚಿತಪಡಿಸಿಕೊಳ್ಳುವುದು.
 • ವಿಜ್ಞಾನ, ತಂತ್ರಜ್ಞಾನ ಮತ್ತು ಜ್ಞಾನ ಆಧಾರಿತ ಉದ್ಯಮಗಳಲ್ಲಿ ಬೆಂಗಳೂರಿನ ನಾಯಕತ್ವವನ್ನು ನಿರ್ಮಿಸುವುದು ಮತ್ತು ಉಳಿಸಿಕೊಳ್ಳುವುದು.
 • ವ್ಯಾಪಕ ಭಾಗವಹಿಸುವಿಕೆ ಮತ್ತು ಆಳವಾದ ಪ್ರಜಾಪ್ರಭುತ್ವದ ವಿಕೇಂದ್ರೀಕರಣದ ಮೂಲಕ ಆಡಳಿತವನ್ನು ಸುಧಾರಿಸುವುದು.

 

ವಿಷನ್ ಸಾಧಿಸಲು ಆರು ಮಿಷನ್ ಗುಂಪುಗಳು ಅಂದರೆ ಮಾನವ ಅಭಿವೃದ್ಧಿ, ಗ್ರಾಮೀಣ ಆರ್ಥಿಕ ಅಭಿವೃದ್ಧಿ, ವಿಕೇಂದ್ರೀಕರಣ ಮತ್ತು ಆಡಳಿತ, ಸಾಮಾಜಿಕ ಸಬಲೀಕರಣ, ಮೂಲಸೌಕರ್ಯ ಮತ್ತು ಕೈಗಾರಿಕಾ ಅಭಿವೃದ್ಧಿ ಮತ್ತು ಪರಂಪರೆ‌ ಇವುಗಳನ್ನು ರಚಿಸಲಾಗಿದೆ.

 

ಇತ್ತೀಚಿನ ನವೀಕರಣ​ : 29-04-2019 11:51 AM ಅನುಮೋದಕರು: Admin