ಅಭಿಪ್ರಾಯ / ಸಲಹೆಗಳು

ಮಾನವ ಅಭಿವೃದ್ಧಿ ವಿಭಾಗದ ಬಗ್ಗೆ

ಮಾನವ ಅಭಿವೃದ್ಧಿ ವಿಭಾಗವು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಭಾಗವಾಗಿರುತ್ತದೆ.

ವಿಭಾಗದ ಕಾರ್ಯಚಟುವಟಿಕೆಗಳು ಈ ಕೆಳಕಂಡಂತಿವೆ;

 • ಮೊದಲ ಕರ್ನಾಟಕ ರಾಜ್ಯ ಮಾನವ ಅಭಿವೃದ್ಧಿ ವರದಿಯನ್ನು 1999ರಲ್ಲಿ ಹಾಗೂ ಎರಡನೇ ಕರ್ನಾಟಕ ರಾಜ್ಯ ಮಾನವ ಅಭಿವೃದ್ಧಿ ವರದಿಯನ್ನು 2005 ರಲ್ಲಿ ಹೊರತರಲಾಯಿತು.
 • ರಾಜ್ಯವು ತಾಲ್ಲೂಕು ಮಟ್ಟದಲ್ಲಿ ಮಾನವ ಅಭಿವೃದ್ಧಿಯ ವಿವಿಧ ಸೂಚಕಗಳ ವಸ್ತುಸ್ಥಿತಿಯನ್ನರಿಯಲು, ಯು.ಎನ್.ಡಿ.ಪಿ. ಸಹಯೊಗದೊಂದಿಗೆ 2005-08ರ ಅವಧಿಯಲ್ಲಿ ಪ್ರಾಯೋಗಿಕವಾಗಿ ಕಲಬುರಗಿ, ಮೈಸೂರು, ಉಡುಪಿ ಮತ್ತು ವಿಜಯಾಪುರ ಜಿಲ್ಲೆಗಳ ಜಿಲ್ಲಾ ಮಾನವ ಅಭಿವೃದ್ಧಿ ವರದಿಗಳನ್ನು ತಯಾರಿಸಲಾಯಿತು ಮತ್ತು ಈ ವರದಿಗಳನ್ನು 2010 ರಲ್ಲಿ ಹೊರತರಲಾಯಿತು. ಹೆಮ್ಮೆಪಡುವ ವಿಷಯವೆಂದರೆ, ಉಡುಪಿ ಮತ್ತು ವಿಜಯಾಪುರ ಜಿಲ್ಲಾ ಮಾನವ ಅಭಿವೃದ್ಧಿ ವರದಿಗಳು ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟವು ’ಮಾಪನ ವೈಧಾನಿಕತೆ’ ಯಲ್ಲಿ ನಾವಿನ್ಯತೆಯ ಮೇಲಿನ ಹೆಚ್ಚಿನ ಗಮನಕ್ಕಾಗಿ ಪ್ರಪ್ರಥಮ ಭಾರತ ಮಾನವ ಅಭಿವೃದ್ಧಿ ಪ್ರಶಸ್ತಿ-“ಮಾನವ ವಿಕಾಸ್”ವನ್ನು ಉಡುಪಿ ಜಿಲ್ಲಾ ಮಾನವ ಅಭಿವೃದ್ಧಿ ವರದಿಗೆ ನೀಡಲಾಯಿತು.
 • ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕ ಸರ್ಕಾರವು 2014ರಲ್ಲಿ ರಾಜ್ಯದ ಎಲ್ಲಾ ಮೂವತ್ತು ಜಿಲ್ಲೆಗಳ ಜಿಲ್ಲಾ ಮಾನವ ಅಭಿವೃದ್ಧಿ ವರದಿಗಳನ್ನು ಏಕಕಾಲದಲ್ಲೇ ಆಯಾ ಜಿಲ್ಲಾ ಪಂಚಾಯತ್‍ ವತಿಯಿಂದ ತಯಾರಿಸಿ ಪ್ರಕಟಿಸಲಾಯಿತು. ಎಲ್ಲಾ ಜಿಲ್ಲೆಗಳ ಏಕರೂಪತೆಯನ್ನು ಕಾಪಾಡಲು ಸಮಗ್ರ ಮಾರ್ಗದರ್ಶಿ “Guidelines Document” ದಾಖಲಾತಿಯನ್ನು ತಯಾರಿಸಲಾಯಿತು. 7 ಸೂಚ್ಯಂಕಗಳನ್ನು (ಮಾನವ ಅಭಿವೃದ್ಧಿ ಸೂಚ್ಯಂಕ-11 ಸೂಚಕಗಳು,ಲಿಂಗ ಅಸಮಾನತಾ ಸೂಚ್ಯಂಕ-15 ಸೂಚಕಗಳು,ಮಕ್ಕಳ ಅಭಿವೃದ್ಧಿ ಸೂಚ್ಯಂಕ-3 ಸೂಚಕಗಳು,ಆಹಾರ ಭದ್ರತಾ ಸೂಚ್ಯಂಕ-18 ಸೂಚಕಗಳು, ಜಿಲ್ಲಾ ಸಂಯುಕ್ತ/ಸಂಯುಕ್ತ ತಾಲ್ಲೂಕು ಅಭಿವೃದ್ಧಿ ಸೂಚ್ಯಂಕ-68 ಸೂಚಕಗಳು,ನಗರ ಅಭಿವೃದ್ಧಿ ಸೂಚ್ಯಂಕ-11 ಸೂಚಕಗಳು ಮತ್ತು ಸಂಯುಕ್ತ ದಲಿತ ಅಭಿವೃದ್ಧಿ ಸೂಚ್ಯಂಕ) ಗುರುತಿಸಿ ಗಣನೆ ಮಾಡಲಾಯಿತು. ಪೂರ್ವಸಿದ್ಧತಾ ತಯಾರಿಕೆ ಹಂತದಲ್ಲಿ ಪ್ರತಿ ಜಿಲ್ಲೆಗಳಲ್ಲಿ, 2 ಜಿಲ್ಲಾಮಟ್ಟದ ಹಾಗೂ 3 ತಾಲ್ಲೂಕು ಮಟ್ಟದ ಕಾರ್ಯಾಗಾರವನ್ನು ನಡೆಸಲಾಯಿತು. ಎಲ್ಲಾ ಜಿಲ್ಲೆಗಳ ಗುಣಮಟ್ಟದ ವರದಿಗಾಗಿ Quality Monitoring Group (QMG) ಅನ್ನು ರಚಿಸಲಾಯಿತು.
 • ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯು ಮಾನವ ಅಭಿವೃದ್ಧಿ ಮತ್ತು ಸಂಬಂಧಿತ ಸೂಚ್ಯಂಕಗಳ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ 30 ಜಿಲ್ಲಾ ಮಾನವ ಅಭಿವೃದ್ಧಿ ವರದಿಗಳನ್ನು ಆಧರಿಸಿ “ಮಾನವ ಅಭಿವೃದ್ಧಿ: ಕರ್ನಾಟಕದ ಜಿಲ್ಲೆಗಳು, ತಾಲ್ಲೂಕುಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸಾಧನೆ,2014-ಒಂದು ಕ್ಷಿಪ್ರ ನೋಟ” ಎಂಬ ಸಂಕಲನವನ್ನು ಹೊರತರಲಾಯಿತು. ಈ ವರದಿಯು ವಿವಿಧ ಸೂಚ್ಯಂಕಗಳ ಮೇಲೆ ಜಿಲ್ಲೆಗಳು/ತಾಲ್ಲೂಕುಗಳು/ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿತ ಕಾರ್ಯಕ್ಷಮತೆಯ ವಿವರಗಳನ್ನು ಒದಗಿಸುತ್ತದೆ.
 •  ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕ ಸರ್ಕಾರವು ಎಲ್ಲಾ ಗ್ರಾಮ ಪಂಚಾಯಿತಿಗಳ ಮಾನವ ಅಭಿವೃದ್ಧಿ ವರದಿ “ಮಾನವ ಅಭಿವೃದ್ಧಿ: ಕರ್ನಾಟಕದ ಗ್ರಾಮ ಪಂಚಾಯಿತಿಗಳ ಸಾಧನೆ-2015” ವರದಿಯನ್ನು ಅಬ್ದುಲ್ ನಜೀರ್ ಸಾಬ್ ರಾಜ್ಯ ಸಂಸ್ಥೆ ರವರ ಸಹಯೋಗದೊಂದಿಗೆ ಹೊರತರಲಾಯಿತು.
 • ಮೂರನೇ ಕರ್ನಾಟಕ ರಾಜ್ಯ ಮಾನವ ಅಭಿವೃದ್ಧಿ ವರದಿ-2015ರ ವಿಷಯ ಸಮಾನತೆಯಿಂದ ಕೂಡಿದ ಮಾನವ ಅಭಿವೃದ್ಧಿಯ ವೇಗ ಸಂವರ್ಧನೆ ದೊಂದಿಗೆ ಫೆಬ್ರವರಿ 2019ರಲ್ಲಿ ಹೊರತರಲಾಯಿತು.
 • ಕರ್ನಾಟಕ ರಾಜ್ಯವು ಮೊಟ್ಟ ಮೊದಲ ಬಾರಿಗೆ “ಬೆಂಗಳೂರು ನಗರ ಮಾನವ ಅಭಿವೃದ್ಧಿ ವರದಿ”ಯನ್ನು ತಯಾರಿಸುವ ಕಾರ್ಯ ಪ್ರಗತಿಯಲ್ಲಿದೆ.
 • ಮಾನವ ಅಭಿವೃದ್ಧಿ ವಿಭಾಗದ ಸಹಕಾರದೊಂದಿಗೆ The Center for Public Policy, IIM ರವರ ವತಿಯಿಂದ “ಕರ್ನಾಟಕ ಅವಿಷ್ಕಾರ ವರದಿ”ಯನ್ನು ತಯಾರಿಸಲಾಯಿತು.
 • ಸುಸ್ಥಿರ ಅಭಿವೃದ್ಧಿ ಗುರಿಗಳು ಎಲ್ಲಾ ಬಗೆಯ ಆಯಾಮಗಳಲ್ಲಿ ಬಡತನವನ್ನು ಅಂತ್ಯಗೊಳಿಸಲು ಹಾಗೂ 2030ರ ಹೊತ್ತಿಗೆ ಜನರು, ಗ್ರಹ ಮತ್ತು ಸಮೃದ್ಧತೆಗಾಗಿ ಸಮಾನ ಮತ್ತು ಕೇವಲ ಸುರಕ್ಷಿತ ಪ್ರಪಂಚವನ್ನು ರೂಪಿಸುವ ಒಂದು ಸಾರ್ವತ್ರಿಕ ಒಪ್ಪಂದವಾಗಿದೆ.ವಿಶ್ವ ಸಂಸ್ಥೆಯು ನೀಡಿರುವ 17 ಸುಸ್ಥಿರ ಅಭಿವೃದ್ಧಿ ಗುರಿಗಳು(Goals) ಹಾಗೂ 169 ಗುರಿಗಳನ್ನು(Targets) ಭಾರತವು ಅಳವಡಿಸಿಕೊಂಡಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಸಮಸ್ಯೆಗಳಾದ ಬಡತನ, ಹಸಿವು, ಆರೋಗ್ಯ, ಶಿಕ್ಷಣ, ಹವಮಾನ ಬದಲಾವಣೆ, ಲಿಂಗ ಸಮಾನತೆ, ನೀರು, ನೈರ್ಮಲ್ಯ,ಶಕ್ತಿ,ಪರಿಸರ ಮತ್ತು ಸಾಮಾಜಿಕ ನ್ಯಾಯಗಳನ್ನು ಒಳಗೊಂಡಿದೆ.

   ಅ) ರಾಜ್ಯವು ಯೋಜನಾ ಇಲಾಖೆಯಡಿ “ಸುಸ್ಥಿರ ಅಭಿವೃದ್ಧಿ ಕೋಶ”ವನ್ನು ರೂಪಿಸಿದ್ದು, ಸುಸ್ಥಿರ ಅಭಿವೃದ್ಧಿ ಗುರಿಗಳ ತಾಂತ್ರಿಕ ಸಹಾಯಕ್ಕಾಗಿ NFI, ನವದೆಹಲಿ ರವರ ಸಹಕಾರ ಪಡೆಯಲಾಗುತ್ತಿದೆ.

   ಆ) ರಾಜ್ಯ ಕ್ರಿಯಾ ಯೋಜನೆಯನ್ನು ತಯಾರಿಸಿ ಅಂತಿಮಗೊಳಿಸಲು ಎಲ್ಲಾ 17 ಗುರಿ ಸಮಿತಿಗಳು ಕಾಲಕಾಲಕ್ಕೆ ಸಭೆಗಳನ್ನು ಕೈಗೊಂಡು ಗುರಿವಾರು ಕ್ರಿಯಾಯೋಜನೆಯನ್ನು ತಯಾರಿಸುವ ಕಾರ್ಯ ಪ್ತಗತಿಯಲ್ಲಿರುತ್ತದೆ.

   ಇ) ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳ ಬಗ್ಗೆ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ  ಸಾಮರ್ಥ್ಯದ ತರಬೇತಿಯನ್ನು ಮತ್ತು ತರಬೇತಿಗೆ ಸಂಬಂಧಿಸಿದ ಮಾರ್ಗಸೂಚಿಗಳ ವಿನ್ಯಾಸದ ಕುರಿತು ATI ಮತ್ತು  SIRD ರವರ ಸಹಯೋಗದೊಂದಿಗೆ ಕೈಗೊಳ್ಳಲಾಗುತ್ತಿದೆ.

   ಈ) ರಾಜ್ಯವು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಪಟ್ಟಂತೆ IEC ಸಾಮಗ್ರಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

 • ರಾಜ್ಯವು SDG India Index: Base line Report-2018 ಮತ್ತು Dashboard ನಲ್ಲಿ 62 ರಾಷ್ಟ್ರೀಯ ಸೂಚಕಗಳ ಮಾಹಿತಿಯನ್ನು ಇಂಧೀಕರಿಸುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.

 

ಇತ್ತೀಚಿನ ನವೀಕರಣ​ : 12-03-2020 12:37 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080