ಅಭಿಪ್ರಾಯ / ಸಲಹೆಗಳು

ಕೆಎಸ್‍ಎಸ್‍ಡಿಎ ಬಗ್ಗೆ

ಸಾಮಾನ್ಯ ಪರಿಷತ್ತಿನ ಅಧ್ಯಕ್ಷರು,
ಕರ್ನಾಟಕ ಸಾಂಖ್ಯಿಕ ವ್ಯವಸ್ಥೆ ಅಭಿವೃದ್ಧಿ ಸಂಸ್ಥೆ :
ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ
ಸದಸ್ಯ ಕಾರ್ಯದರ್ಶಿ,
ಕರ್ನಾಟಕ ಸಾಂಖ್ಯಿಕ ವ್ಯವಸ್ಥೆ ಅಭಿವೃದ್ಧಿ ಸಂಸ್ಥೆ :
ಯೋಜನಾ ನಿರ್ದೇಶಕರು
ವಿಳಾಸ :

ಕರ್ನಾಟಕ ಸಾಂಖ್ಯಿಕ ವ್ಯವಸ್ಥೆ ಅಭಿವೃದ್ದಿ ಸಂಸ್ಥೆ,

# 425, 4ನೇ ಮಹಡಿ, 1ನೇ ಗೇಟ್,
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಕಛೇರಿ ಆವರಣ,
ಬಹುಮಹಡಿ ಕಟ್ಟಡ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು 560 001

ಫ್ಯಾಕ್ಸ್ : 080-22340986
ಇ-ಮೇಲ್ : pdkssda[at]gmail[dot]com
pdkssda-ka[at]nic[dot]in
ddkssda-ka[at]nic[dot]in



ಕರ್ನಾಟಕ ರಾಜ್ಯ ಕಾರ್ಯತಾಂತ್ರಿಕ ಸಾಂಖ್ಯಿಕ ಯೋಜನೆ [KSSSP]ಯ ಉದ್ದೇಶಗಳು ಕರ್ನಾಟಕ ರಾಜ್ಯ ಕಾರ್ಯತಾಂತ್ರಿಕ ಸಾಂಖ್ಯಿಕ ಯೋಜನೆಯನ್ನು ಕಾರ್ಯಗತಗೊಳಿಸುವುದು ಮತ್ತು ಕೆಳಗಿನ ಚಟುವಟಿಕೆಗಳನ್ನು ಬೆಂಬಲಿಸುವುದು :

  • ಪರಿಣಾಮಕಾರಿಯಾದ ಯೋಜನೆ ಸಂಯೋಜನೆ ಮತ್ತು ಮೌಲ್ಯಮಾಪನಕ್ಕಾಗಿ ಸಾಂಖ್ಯಿಕ ಬೆನ್ನುಲುಬನ್ನು ಬಲಪಡಿಸುವುದು.
  • ಸಮರ್ಥ ಹಾಗೂ ಸಮರ್ಪಕ ಸಾಂಖ್ಯಿಕ ಮಾನವ ಸಂಪನ್ಮೂಲವನ್ನು ಆಯಾ ಸ್ಥಾನದಲ್ಲಿರಿಸುವುದು.
  • ಸಾಮರ್ಥ್ಯ ಬೆಳವಣಿಗೆ ತರಬೇತಿ ಮತ್ತು ಪೂರಕ ಸೇವೆಗಳು.
  • ಮಾಹಿತಿ ಸಂಗ್ರಹ, ಜೋಡಿಸುವಿಕೆ, ವಿಶ್ಲೇಷಣೆ, ಶೇಖರಣೆ, ಪ್ರಸರಣ ಮತ್ತು ಹಂಚಿಕೆಗಾಗಿ ಯಂತ್ರಾಂಶ ಮತ್ತು ತಂತ್ರಾಂಶಗಳ ಬಳಕೆ.
  • ಅಂಕಿ-ಅಂಶಗಳ ಕುರಿತಾದ ಸುಸಂಬದ್ಧ ನೀತಿ ಮತ್ತು ಕನಿಷ್ಟ ಮಾನದಂಡಗಳು: ಸಂಗ್ರಹಣೆ, ಬಳಕೆ, ಅಭಿವ್ಯಕ್ತಿಗಳು, ಹಂಚಿಕೆ.
  • ವಿಶ್ವಾಸಾರ್ಹ, ನಂಬಲರ್ಹವಾದ, ಸಮಯೋಚಿತ ಮತ್ತು ಸಮರ್ಪಕ ಅಂಕಿ-ಅಮಶಗಳ ಬೆಂಬಲ.
  • ಅಧೀನ ಇಲಾಖೆಯ ಮತ್ತು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜವಾಬ್ದಾರಿಯ ಸ್ಪಷ್ಟತೆ: ಪರಸ್ಪರ ಬೆಂಬಲ, ಡನಾಟ ಮತ್ತು ಸ್ಪಷ್ಟ ಹೊಣೆಗಾರಿಕೆ.


MOU ಗೆ ಸಹಿ ಹಾಕುವ ಮತ್ತು 1 ನೇ ಕಂತಿನ ಬಿಡುಗಡೆಯವರೆಗೆ ಕರ್ನಾಟಕ ಸಾಂಖ್ಯಿಕ ವ್ಯವಸ್ಥೆ ಅಭಿವೃದ್ಧಿ ಸಂಸ್ಥೆ ಯ ಪ್ರಮುಖ ಚಟುವಟಿಕೆಯ ಪರಿವರ್ತನೆ :

  • ಕರ್ನಾಟಕ ಸರ್ಕಾರವು ISSP ನಲ್ಲಿ ಭಾಗವಹಿಸಲು ನಿರ್ಧರಿಸಿತು ಮತ್ತು ದಿನಾಂಕ : 28-05-2008 ರಂದು ಕೇಂದ್ರ ಸರ್ಕಾರಕ್ಕೆ ಪತ್ರದ ಮುಖೇನ ತನ್ನ ಆಸಕ್ತಿಯನ್ನು ತಿಳಿಸಿತ್ತು.
  • 31.12.2008 ರಂದು ರಾಜ್ಯ ಕಾರ್ಯತಾಂತ್ರಿಕ ಸಾಂಖ್ಯಿಕ ಯೋಜನೆಯನ್ನು ರೂಪಿಸಲು ಮತ್ತು ಅನುಷ್ಠಾನಗೊಳಿಸಲು ಭಾರತ ಸರ್ಕಾರ ವಿವರವಾದ ಮಾರ್ಗಸೂಚಿಗಳನ್ನು ನೀಡಿತು.
  • 14.01.2009 ರಂದು ನವದೆಹಲಿಯಲ್ಲಿ ನಡೆದ ಕಾರ್ಯಾಗಾರದ ನಂತರ ಕರ್ನಾಟಕ ರಾಜ್ಯ ಕಾರ್ಯತಾಂತ್ರಿಕ ಸಾಂಖ್ಯಿಕ ಯೋಜನೆ (KSSSP) ಯನ್ನು ಪ್ರಾರಂಭಿಸಲು ಮಾರ್ಗಸೂಚಿಯು ಸಿದ್ಧವಾಯಿತು. ದಿನಾಂಕ: 07.03.2009 ರ ಸರ್ಕಾರದ ಆದೇಶದಂತೆ ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಇವರ ಅಧ್ಯಕ್ಷತೆಯಲ್ಲಿ ಯೋಜನಾ ನಿರ್ವಹಣೆ ತಂಡ ರಚಿಸಲಾಯಿತು.
  • ಪ್ರಸ್ತುತ ರಾಜ್ಯ ಸಾಂಖ್ಯಿಕ ವ್ಯವಸ್ಥೆಯ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಆಧಾರದ ಮೇಲೆ, ಕರ್ನಾಟಕ ರಾಜ್ಯ ಕಾರ್ಯತಾಂತ್ರಿಕ ಸಾಂಖ್ಯಿಕ ಯೋಜನೆ (KSSSP) ಯನ್ನು ಇಲಾಖೆಗಳು ಮತ್ತು ಇತರ ಪಾಲುದಾರರ ಸಮಾಲೋಚನೆಯ ನಂತರ ಅಂತರವನ್ನು ಜೋಡಿಸಲು ರಚಿಸಲಾಗಿದೆ.
  • ದಿನಾಂಕ:25.03.2009 ರ ಸರ್ಕಾರಿ ಆದೇಶದಂತೆ KSSSPಯ ರಚನೆ ಹಾಗೂ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರವು ಕರ್ನಾಟಕ ಸಾಂಖ್ಯಿಕ ವ್ಯವಸ್ಥೆ ಅಭಿವೃದ್ಧಿ ಸಂಸ್ಥೆ (KSSDA) ಎಂಬ ನೋಡಲ್ ಸಂಸ್ಥೆಯನ್ನು ಸ್ಥಾಪಿಸಿತು.ಈ ಆದೇಶದೊಂದಿಗೆ ಸರ್ಕಾರವು ಸಾಮಾನ್ಯ ಪರಿಷತ್ತು, ಆಡಳಿತ ಪರಿಷತ್ತು ಮತ್ತು ಯೋಜನಾ ನಿರ್ದೇಶಕರು, KSSDA ಇವರ ಅಧಿಕಾರ ಹಾಗೂ ಕಾರ್ಯಚಟುವಟಿಕೆಗಳು, ಇತರೆ ವಿಷಯಗಳಿಗೆ ಸಂಬಂಧಿಸಿದಂತೆ KSSDA ಗೆ MoA ಹಾಗೂ ನಿಯಮ ಮತ್ತು ಕಾಯಿದೆಗಳನ್ನು ನೀಡಿದೆ.
  • ಕರ್ನಾಟಕ ಸಾಂಖ್ಯಿಕ ವ್ಯವಸ್ಥೆ ಅಭಿವೃದ್ಧಿ ಸಂಸ್ಥೆ (KSSDA) ಯನ್ನು ಕರ್ನಾಟಕ ಸಂಘ ಸಂಸ್ಥೆಗಳ ನೋಂದಣಿ ಕಾಯಿದೆ, 1960 ರ ಅಡಿಯಲ್ಲಿ ದಿನಾಂಕ:20.04.2009 ರಂದು ನೋಂದಾಯಿಸಲಾಗಿದೆ.
  • KSSSP ಯ ರಚನೆ ಹಾಗೂ ಅನುಷ್ಟಾನದ ಮೇಲ್ವಿಚಾರಣೆಗಾಗಿ ದಿನಾಂಕ:25.03.2009 ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಚಾಲನಾ ಸಮಿತಿಯನ್ನು ರಚಿಸಲಾಯಿತು
  • ರಾಜ್ಯದ ಪ್ರತಿನಿಧಿಗಳು ಚೆನ್ನೈ, ಫರಿದಾಬಾದ್, ಶಿಲ್ಲಾಂಗ್, ಗ್ಯಾಂಗ್ಟಕ್ ನಲ್ಲಿ ನಡೆದ ಪ್ರಾದೇಶಿಕ ಕಾರ್ಯಾಗಾರಕ್ಕೆ ಸಹ ಹಾಜರಾಗಿದ್ದರು ಹಾಗೂ SSSP ರಚನೆಗೆ ಸಂಬಂಧಪಟ್ಟಂತೆ ಇತರೆ ರಾಜ್ಯಗಳ ಅನುಭವಗಳನ್ನು ಮತ್ತು ಅಭಿಪ್ರಾಯಗಳನ್ನು ಪರಸ್ಪರ ಹಂಚಿಕೊಂಡರು ಹಾಗೂ MOSPI ಯ ಮಾರ್ಗದರ್ಶನಗಳನ್ನು ಕೋರಿದೆ.
  • ಉನ್ನತ ಮಟ್ಟದ ಚಾಲನಾ ಸಮಿತಿಯು ದಿನಾಂಕ:19.12.2009 ರಂದು KSSSP ಯನ್ನು ಅನುಮೋದಿಸಿತು.
  • 2010 ರ ಮಾರ್ಚ್ 19 ರಂದು ನಡೆದ ಸಭೆಯಲ್ಲಿ ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ(ಸಿಸಿಇಎ) ಯಿಂದ ISSP ಯು ಅಗತ್ಯ ಅನುಮೋದನೆಯನ್ನು ಪಡೆದಿದೆ ಹಾಗೂ ರಾಜ್ಯದ ಅಧಿಕಾರಿಗಳು ತಮ್ಮ ರಾಜ್ಯ ಯೋಜನಾ ರಚನೆಯ ಕಾರ್ಯದಲ್ಲಿ ಮುಂದುವರೆಯಲು ಕೋರಿದ್ದಾರೆ.
  • ರಾಜ್ಯ ಸರ್ಕಾರವು ಆರ್ಥಿಕ ಇಲಾಖೆಯ ಸಮ್ಮತಿಯೊಂದಿಗೆ ಆದೇಶಗಳನ್ನು ಹೊರಡಿಸಿತು ಹಾಗೂ ದಿನಾಂಕ:11.08.2010 ರ ಸಚಿವ ಸಂಪುಟದ ಅನುಮೋದನೆಯೊಂದಿಗೆ KSSDA ಗೆ 10 ಹುದ್ದೆಗಳನ್ನು ರಚಿಸಲಾಯಿತು. ಒಟ್ಟು ಯೋಜನೆಯ ವೆಚ್ಚ ರೂ.4682.27 ಲಕ್ಷ (ಕೇಂದ್ರ ಸರ್ಕಾರ – 3284.68 ಲಕ್ಷ ಮತ್ತು ರಾಜ್ಯ ಸರ್ಕಾರ – 1397.59 ಲಕ್ಷ)
  • KSSDA ಗೆ ಅಗತ್ಯವಿರುವ ಸೌಲಭ್ಯಗಳನ್ನು ಹಾಗೂ ಹುದ್ದೆಗಳನ್ನು ದಿನಾಂಕ:05.08.2010 ರ ಸರ್ಕಾರಿ ಆದೇಶದಡಿಯಲ್ಲಿ ಅನುಮೋದಿಸಲಾಗಿದೆ.
  • KSSDA ಯು ದಿನಾಂಕ:01.10.2010 ರಂದು ಯೋಜನಾ ನಿರ್ದೇಶಕರು ಸಂಸ್ಥೆಯ ಮುಂದಾಳತ್ವವನ್ನು ವಹಿಸಿಕೊಳ್ಳುವುದರೊಂದಿಗೆ ತನ್ನ ಕಾರ್ಯವನ್ನು ಪ್ರಾರಂಭಿಸಿತು. ದಿನಾಂಕ:07.03.2011 ರಂದು KSSDA ಕಛೇರಿ ಹೊಸ ವರಣದಲ್ಲಿ ಕಾರ್ಯ ಪ್ರಾರಂಭಿಸಿತು.
  • ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವಿನ ಒಡಂಬಡಿಕೆಗೆ ದಿನಾಂಕ:10.12.2010 ರಂದು ಸಹಿ ಮಾಡಲಾಗಿದೆ ಹಾಗೂ ಅದೇ ದಿನಾಂಕದಿಂದ ಅಕ್ಷರಶಃ KSSSP ಅನುಷ್ಟಾನವನ್ನು ಆರಂಭಿಸಲಾಗಿದೆ.

ಇತ್ತೀಚಿನ ನವೀಕರಣ​ : 28-02-2019 01:38 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080