ವಿಭಾಗದ ಮಾಹಿತಿ

ಸಂಪೂರ್ಣ ಯೋಜನಾ ವಿಭಾಗ

ಈ ವಿಭಾಗವು ಈ ಕೆಳಕಂಡ ಇಲಾಖೆಗಳ ನೋಡಲ್ ವಿಭಾಗವಾಗಿರುತ್ತದೆ. 

    1)ಜಲ ಸಂಪನ್ಮೂಲ ಇಲಾಖೆ: ಭಾರಿ ಮತ್ತು ಮಧ್ಯಮ ನೀರಾವರಿ, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ(ಕಾಡಾ), ಸಣ್ಣ ನೀರಾವರಿ ಮತ್ತು ಅಂರ್ತಜಲ ಅಭಿವೃದ್ಧಿ ಇಲಾಖೆ.

     2) ಇಂಧನ ಇಲಾಖೆ: ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಕರ್ನಾಟಕ ವಿದ್ಯುತ್ ಅಭಿವೃದ್ಧಿ ನಿಯಮಿತ, ನವೀಕರಿಸಬಹುದಾದ ಇಂಧನ  ಅಭಿವೃದ್ಧಿ ನಿಯಮಿತ.

     3) ಸಾರಿಗೆ ಇಲಾಖೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ  ಮತ್ತು ಬೆಂಗಳೂರು ಮಹಾನಗರ ರಸ್ತೆ ಸಾರಿಗೆ ಸಂಸ್ಥೆ.

     4)ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ.         

     5)ಕಾನೂನು ಇಲಾಖೆ    

     ಸಂಪೂರ್ಣ ಯೋಜನಾ ವಿಭಾಗದ ಕಾರ್ಯಚಟುವಟಿಕೆಗಳು:

ಅ) ಈ ವಿಭಾಗವು ವಾರ್ಷಿಕ ಯೋಜನೆಯನ್ನು ತಯಾರಿಸಲು ನೋಡಲ್ ಇಲಾಖೆಗಳ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಅವಶ್ಯ ಮಾಹಿತಿಗಳನ್ನು ಒದಗಿಸುತ್ತದೆ.

 ಆ)’ಆರ್ಥಿಕ ಮೂಲಭೂತ ಸೌಕರ್ಯಗಳು’ ಅಧ್ಯಾಯವನ್ನು ಆರ್ಥಿಕ ಸಮೀಕ್ಷೆಯಲ್ಲಿ ಅಳವಡಿಸಲು ಈ ವಿಭಾಗವು ಸಹಕರಿಸುವ ಕಾರ್ಯ ನಿರ್ವಹಿಸುತ್ತದೆ.

 ಇ) ಸಂಪೂರ್ಣ ಯೋಜನಾ ವಿಭಾಗವು ನೋಡಲ್ ಇಲಾಖೆಗಳ ಯೋಜನೆಗಳಿಗೆ ಸಂಬಂಧಿಸಿದ  ಅಭಿಪ್ರಾಯ ಕಡತಗಳಿಗೆ ಹಾಗೂ ಸಚಿವ ಸಂಪುಟದ ಟಿಪ್ಪಣಿ ಕಡತಗಳಿಗೆ ಅಭಿಪ್ರಾಯ ಕೊಡುವ ಕೆಲಸ ನಿರ್ವಹಿಸುತ್ತದೆ.

  ಈ) ಈ ವಿಭಾಗವು ನೋಡಲ್ ಇಲಾಖೆಗಳ ಮಾಸಿಕ ಪ್ರಗತಿ ವರದಿಗಳನ್ನು ಡಿಸಿಷನ್ ಸಪೋರ್ಟ ಸಿಸ್ಟಂ (DSS)  ನಲ್ಲಿ ಅಳವಡಿಸಲು ಸಹಕರಿಸುತ್ತದೆ.

    ಉ) ಈ ವಿಭಾಗವು ಇಂಧನ ವಲಯಕ್ಕೆ ಸಂಬಂಧಿಸಿದ ಸುಸ್ಥಿರ ಅಭಿವೃದ್ದಿ ಗುರಿಗಳು-07 “ಎಲ್ಲರಿಗೂ ಕೈಗೆಟುಕಬಲ್ಲ, ವಿಶ್ವಾಸಾರ್ಹ, ಸುಸ್ಥಿರ ಮತ್ತು ಆಧುನಿಕ ಇಂಧನದ ಲಭ್ಯತೆಯನ್ನು ಖಾತ್ರಿಗೊಳಿಸುವುದು” ಕ್ಕೆ ಸಂಬಂಧಪಟ್ಟಂತೆ ಸೂಚಕಗಳನ್ನು ಅಂತಿಮಗೊಳಿಸಿ ಕರಡು ವರದಿಯನ್ನು ಸಿದ್ಧಪಡಿಸಿ. ರಾಜ್ಯದ            ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವ ಕಾರ್ಯದಲ್ಲಿ ಸಹಕರಿಸುತ್ತದೆ.

 

 

ಇತ್ತೀಚಿನ ನವೀಕರಣ​ : 14-05-2019 11:24 AM ಅನುಮೋದಕರು: Admin