ಅಭಿಪ್ರಾಯ / ಸಲಹೆಗಳು

ವಿಭಾಗದ ಮಾಹಿತಿ

ಯೋಜನಾ ಹಣಕಾಸು ಮತ್ತು ಸಂಪನ್ಮೂಲ ವಿಭಾಗದ ಚಟುವಟಿಕೆಗಳು

 • ಯೋಜನಾ ಹಣಕಾಸು ಮತ್ತು ಸಂಪನ್ಮೂಲ ವಿಭಾಗದ ಕ್ರಿಯಾತ್ಮಕ ಜವಾಬ್ದಾರಿಗಳು ಈ ಕೆಳಕಂಡಂತೆ ಇರುತ್ತವೆ. 
    (ಎ) ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ವಲಯವಾರು ಅನುದಾನ ಹಂಚಿಕೆಯನ್ನು ತಯಾರಿಸುವುದು. 
    (ಬಿ) ರಾಜ್ಯ ವಲಯ ಯೋಜನೆಗಳಿಗೆ ಅಂತರ್‌ - ವಲಯವಾರು ಅನುದಾನ ಹಂಚಿಕೆಯನ್ನು    ತಯಾರಿಸುವಾಗ ಈ ಕೆಳಗಿ ಅಂಶಗಳನ್ನು ಪರಿಗಣಿಸಲಾಗುತ್ತದೆ.   
           ೧) ಇಲಾಖೆಗಳ ಅಗತ್ಯತೆ ಹಾಗೂ ಸಂಪನ್ಮೂಲಗಳ ಲಭ್ಯತೆ   
           ೨) ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯದ ಪಾಲು  

                    ೩) ಬಾಹ್ಯ ನೆರವಿನ ಯೋಜನೆಗಳು

                    ೪) ನಬಾರ್ಡ್

                    ೫) ವಿಶೇಷ ಅಭಿವೃದ್ಧಿ ಯೋಜನೆ ಇತ್ಯಾದಿ. ಇಲಾಖೆಗಳ ಆರ್ಥಿಕ  ಮತ್ತು ಭೌತಿಕ  ಸಾಧನೆಯ ಪ್ರಗತಿಯನ್ನು ಸಹ ಪರಿಗಣಿಸಲಾಗುತ್ತದೆ.   

    ‌        (ಸಿ) ಕ್ಷೇತ್ರ ಇಲಾಖೆಗಳಿಗೆ  ಅನುದಾನದ ಹಂಚಿಕೆಯನ್ನು ತಿಳಿಯ ಪಡಿಸುವುದು.

 • ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಕುರಿತು ಎರಡು ಸಂಪುಟಗಳಲ್ಲಿ ದಾಖಲೆಗಳನ್ನು ಸಿದ್ದಪಡಿಸುವುದು.
 • ಸಂಪುಟ-1ರಲ್ಲಿ ಕಾರ್ಯಕ್ರಮಗಳ ಎಲ್ಲಾ ವಿವರಗಳು ಅಂದರೆ ಯೋಜನೆಯ ಉದ್ದೇಶ, ಯೋಜನೆಗಳ ಫಲಾನುಭವಿಗಳು, ಯೋಜನೆಯ ಪರಿಣಾಮ ಮತ್ತು ಯೋಜನೆಯ ಅನುಷ್ಠಾನದ ವಿವರ ಇತ್ಯಾದಿಗಳು ಒಳಗೊಂಡಿರುತ್ತದೆ.
 • ಸಂಪುಟ-2ರಲ್ಲಿ ವಲಯವಾರು, ಕಾರ್ಯಕ್ರಮವಾರು ಪ್ರಸಕ್ತ ಸಾಲಿನ ಹಾಗೂ ಹಿಂದಿನ ಸಾಲಿನ, ಭೌತಿಕ ಗುರಿ ಹಾಗೂ ಸಾಧನೆ, ಬಾಹ್ಯ ನೆರವಿನ ಯೋಜನೆಗಳ ವಿವರಗಳು (EAP), ಕೇಂದ್ರ ಪುರಸ್ಕ್ರತ ಯೋಜನೆಯ ವಿವರಗಳು, ವಿಶೇಷ ಘಟಕ ಯೋಜನೆ/ ಗಿರಿಜನ ಉಪಯೋಜನೆಗಳಡಿ ವಲಯವಾರು ಹಂಚಿಕೆ ಮುಂತಾದ ಅಂಕಿಅಂಶಗಳ ತಃಖ್ತೆ ಇರುತ್ತದೆ.
 • ಇವುಗಳ ಜೊತೆಗೆ ಈ ವಿಭಾಗವು, ನೀತಿ ಆಯೋಗದೊಂದಿಗೆ ಸಭೆಯನ್ನು ಆಯೋಜಿಸುವುದು. ನೀತಿ ಆಯೋಗದ ಸಭೆಗಳಿಗಾಗಿ ಮಾನ್ಯ ಮುಖ್ಯ ಮಂತ್ರಿಗಳ ಭಾಷಣವನ್ನು ತಯಾರಿಸುವುದು ಮುಂತಾದವುಗಳು.
 • ಇವುಗಳೊಂದಿಗೆ ಈ ವಿಭಾಗವು ಪ್ರತಿ ವರ್ಷ  ಆರ್ಥಿಕ ಸಮೀಕ್ಷೆಗಾಗಿ ವಿತ್ತೀಯ ಪ್ರಗತಿ ಹಾಗೂ ರಾಜ್ಯ ಹಣಕಾಸು ಕೌಶಲ್ಯಾಭಿವ್ರದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ, ಸಾರ್ವಜನಿಕ ವಿತರಣಾ ಪದ್ದತಿಯ ಮೂಲಕ ಆಹಾರ ಭದ್ರತೆ, ಅರಣ್ಯ, ಹವಮಾನ ಬದಲಾವಣೆ ಮತ್ತು ಉಪಶಮನದ ಕ್ರಮಗಳು, ಪರಿಶಿಷ್ಟ ಜಾತಿ ಕಲ್ಯಾಣ ಕಾಯಕ್ರಮಗಳು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಕಾಯಕ್ರಮಗಳು ಮುಂತಾದ ಅತಿ ಮುಖ್ಯವಾದ ಅಧ್ಯಾಯಗಳನ್ನು ತಯಾರಿಸಲು ಸಹಯೋಗವನ್ನು ನೀಡುತ್ತದೆ.
 • ಒಟ್ಟು ಪ್ರಮಾಣವನ್ನು ನಿರ್ಧರಿಸಲು ಈ ವಿಭಾಗದಿಂದ ಹಣಕಾಸು ಇಲಾಖೆ ಹಾಗೂ ಆಡಳಿತ ಇಲಾಖೆಗಳೊಂದಿಗೆ ನಿರಂತರ ಸಭೆ ನಡೆಸಲಾಗುತ್ತದೆ. ಆಯವ್ಯಯದಲ್ಲಿ ಬದ್ದವಲ್ಲದ (Uncommitted Portion) ಪ್ರಸ್ತಾಪಿತ ಅನುದಾನಕ್ಕೆ ವಲಯವಾರು ಹಂಚಿಕೆಯನ್ನು ತಯಾರಿಸಿದ ನಂತರ ಅದನ್ನು ಮಾನ್ಯ ಯೋಜನಾ ಸಚಿವರು ಹಾಗೂ ಮುಖ್ಯ ಕಾಯದರ್ಶಿಗಳಿಂದ ಅನುಮೋದನೆ ಪಡೆದು ಅನುಷ್ಠಾನ ಇಲಾಖೆಗಳಿಗೆ ಕಳುಹಿಸಲಾಗುತ್ತದೆ. ಇಲಾಖೆಯವರನ್ನು ಸದರಿ ಪ್ರಸ್ತಾಪಿತ ಅನುದಾನಕ್ಕೆ ಕಾರ್ಯಕ್ರಮವಾರು ಹಂಚಿಕೆ ಮಾಎಇಕೊಳ್ಳಲು ಕೋರಲಾಗುತ್ತದೆ. ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗುವ ಆಯವ್ಯಯ ಪೂ‍ರ್ವಬಾವಿ ಸಭೆಗಳಲ್ಲಿ ಸದರಿ ಕಾರ್ಯಕ್ರಮವಾರು ಅನುದಾನ ಹಂಚಿಕೆ ಬಗ್ಗೆ ಚರ್ಚಿಸಲಾಗುತ್ತದೆ.
 • ಈ ವಿಭಾಗವು ಎನ್‌ ಐ ಸಿ ಸಹಯೋಗದೊಂದಿಗೆ ಇ-ಯೋಜನಾ ತಂತ್ರಾಂಶವನ್ನು ರಾಜ್ಯವಲಯ ಯೋಜನೆಗಳಿಗಾಗಿ ಅಭಿವೃದ್ಧಿ ಪಡಿಸಿದೆ. ಮುಂದಿನ ಹಣಕಾಸು ವರ್ಷಕ್ಕೆ ಯೋಜನಾವಾರು ಅಗತ್ಯೆತೆಗಳನ್ನು ಪ್ರಸ್ತಾಪಿಸಲು ಇಲಾಖೆಗಳಿಗೆ  ಈ ತಂತ್ರಾಂಶವು ಸಹಾಯ ಮಾಡುತ್ತದೆ.  ಯೋಜನಾ ಇಲಾಖೆಯಿಂದ ಪ್ರಸ್ತಾಪಿಸಲಾಗುವ ರಾಜ್ಯವಲಯವಾರು ಅನುದಾನದ ವಿವರಗಳನ್ನು ಎಲ್ಲಾ ಇಲಾಖೆಗಳಿಗೆ ಈ ತಂತ್ರಾಂಶದ ಮೂಲಕವೇ ತಿಳಿಸಲಾಗುತ್ತದೆ.
 • ಯೋಜನಾ, ಹಣಕಾಸು ಮತ್ತು ಸಂಪನ್ಮೂಲ ವಿಭಾಗವು ಈ ಕೆಳಕಂಡ ಇಲಾಖೆಗಳಿಗೆ ನೋಡಲ್‌ ವಿಭಾಗವಾಗಿ  ಕಾರ್ಯನಿರ್ವಹಿಸುತ್ತಿದೆ.  ಸದರಿ ಇಲಾಖೆಗಳು ಅನುಷ್ಠಾನಗೊಳಿಸುವ ವಿವಿಧ ಕಾ‍ರ್ಯಕ್ರಮಗಳಿಗೆ ಯೋಜನಾ ಇಲಾಖೆಯ ಅಭಿಪ್ರಾಯವನ್ನು ನಿರೂಪಿಸುತ್ತಿದೆ.

          ಅ) ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

          ಆ) ಸಹಕಾರ ಇಲಾಖೆ

          ಇ) ಮೂಲ ಭೂತ ಸೌಲಭ್ಯಗಳ ಆಭಿವೃದ್ಧಿ ಇಲಾಖೆ

          ಈ)ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ 

         ಉ) ರೇಷ್ಮೆ ಇಲಾಖೆ

        ಊ) ಆರ್ಥಿಕ ಇಲಾಖೆ

ಇತ್ತೀಚಿನ ನವೀಕರಣ​ : 18-05-2019 03:34 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080