ಅಭಿಪ್ರಾಯ / ಸಲಹೆಗಳು

ವಿಭಾಗದ ಮಾಹಿತಿ

ಯೋಜನಾ ಉಸ್ತುವಾರಿ ಮತ್ತು ಮಾಹಿತಿ ವಿಭಾಗ (ಪಿಎಂಐ ವಿಭಾಗ):

         ವಿವಿಧ ಸರ್ಕಾರಿ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಉಸ್ತುವಾರಿ ಮಾಡುವುದು  ಹಾಗೂ ರಾಜ್ಯಮಟ್ಟದಲ್ಲಿ ವಿವಿಧ ಹಂತಗಳಲ್ಲಿ ನಡೆಸಲಾಗುವ ಪ್ರಗತಿ ಪರಿಶೀಲನಾ ಸಭೆಗಳನ್ನು ಆಯೋಜಿಸುವುದು ಯೋಜನಾ ಇಲಾಖೆಯ ಪಿಎಂಐ ವಿಭಾಗದ ಪ್ರಮುಖ ಕಾರ್ಯವಾಗಿದೆ. ವಿಭಾಗದ ಕಾರ್ಯವಿಧಾನವು ಈ ಕೆಳಕಂಡಂತಿದೆ:

. ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ಪರಿಶೀಲನೆ:-

          ಪ್ರತಿ ತಿಂಗಳೂ ಸಾಮಾನ್ಯವಾಗಿ ಮೊದಲೇ ಗೊತ್ತುಪಡಿಸಿರುವ ಮಾಸಿಕ ಗುರಿಗಳನ್ವಯ ರಾಜ್ಯ ಮಟ್ಟದÀಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ  ಪ್ರಗತಿಯನ್ನು ಪರಿಶೀಲಿಸಲಾಗುತ್ತಿದೆ. ಈ ವಿಭಾಗವು ರಾಜ್ಯ ಮಟ್ಟದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು/ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳನ್ನೊಳಗೊಂಡ ಪ್ರಗತಿ ಪರಿಶೀಲನಾ ಸಭೆಗಳನ್ನು ಪ್ರತಿ ತಿಂಗಳಿಗೊಮ್ಮೆ ಕೈಗೊಳ್ಳುತ್ತದೆ. 

. ಯೋಜನಾ ಕಾರ್ಯಕ್ರಮಗಳ ವಿವಿಧ ಹಂತ ಮಾಸಿಕ ಪರಿಶೀಲನೆ (ಎಂ.ಎಂ.ಆರ್):-

          ಡಿಸಿಷನ್ ಸಪೋರ್ಟ್ ಸಿಸ್ಟಂ (ಆನ್‌ಲೈನ್ ಎಂಪಿಕ್) ಮೂಲಕ ಸಂಗ್ರಹಿಸಲಾದ ಯೋಜನಾ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿಯನ್ನು ಪ್ರಧಾನ ಕಾರ್ಯದರ್ಶಿ, ಯೋಜನಾ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಎಂ.ಎಂ.ಆರ್ ಸಭೆಯಲ್ಲಿ ಚರ್ಚಿಸಲಾಗುವುದು. ಈ ಸಭೆಗಳ ಸಮನ್ವಯ ಕಾರ್ಯವನ್ನು ಈ ವಿಭಾಗವು ಕೈಗೊಂಡಿರುತ್ತದೆ.

. ಕೇಂದ್ರ ಪುರಸ್ಕೃತ, ಕೇಂದ್ರ ವಲಯ ಯೋಜನೆಗಳು ಮತ್ತು ಆಯವ್ಯಯ ಘೋಷಣೆಗಳು:-

          ಈ ವಿಭಾಗವು ವಿವಿಧ ಇಲಾಖೆಗಳು ಅನುಷ್ಠಾನಗೊಳಿಸುವ ಕೇಂದ್ರ ಪುರಸ್ಕೃತ ಮತ್ತು ಕೇಂದ್ರ ವಲಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಯನ್ನು ಪ್ರತಿ ತಿಂಗಳು (ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಒಳಗೊಂಡಂತೆ) ಕೈಗೊಂಡು ಅದರ ಫಲಿತಾಂಶಗಳನ್ನು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಕೆ.ಡಿ.ಪಿ. ಸಭೆಯ ಪ್ರಗತಿ ಪರಿಶೀಲನೆಗೆ ಮಂಡಿಸಲಾಗುತ್ತದೆ.

          ಇದೇ ರೀತಿ ಪ್ರತಿ ಕೆ.ಡಿ.ಪಿ ಸಭೆಗೆ ಮುಂಚಿತವಾಗಿ ವಿವಿಧ ಇಲಾಖೆಗಳ ಆಯವ್ಯಯ ಘೋಷಣೆಯ ಪ್ರಗತಿಯ ಮಾಹಿತಿಯನ್ನು ಸಂಗ್ರಹಿಸಿ, ಕ್ರೋಢೀಕರಿಸಿದ ವರದಿಯನ್ನು ಕೆ.ಡಿ.ಪಿ ಸಭೆಯಲ್ಲಿ ಪರಿÀಶೀಲನೆಗಾಗಿ ಮಂಡಿಸಲಾಗಿರುತ್ತದೆ.

. ಇತರೆ ಇಲಾಖೆಗಳಿಗೆ ನೋಡಲ್ ವಿಭಾಗವಾಗಿ ಕಾರ್ಯ ನಿರ್ವಹಣೆ:-

          ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳಿಗೆ ನೋಡಲ್ ವಿಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದು, ಸದರಿ ಇಲಾಖೆಗಳಿಗೆ ಸಂಬಂಧಿಸಿದಂತೆ

   (ಅ)  ಆಯವ್ಯಯ ಭಾಷಣ ಕಂಡಿಕೆಗಳ ಕಡತಗಳಿಗೆ ಅಭಿಪ್ರಾಯ ನೀಡುವುದು

   (ಆ)  ಇಲಾಖಾ ವಾರ್ಷಿಕ ಯೋಜನೆಯ ತಯಾರಿಕೆಗೆ ಸಮನ್ವಯ  ಕಾರ್ಯ ನಿರ್ವಹಿಸುವುದು

    (ಇ)  ಇಲಾಖೆಗಳಲ್ಲಿ  ನಡೆಸಲ್ಪಡುವ ಎಂ.ಎಂ.ಆರ್ ಹಾಗೂ ಇತರೆ ಸಭೆಗಳಲ್ಲಿ ಯೋಜನಾ ಇಲಾಖೆಯ ಪರವಾಗಿ  ಭಾಗವಹಿಸುವುದು

. ಡಿಸಿಷನ್ ಸಪೋರ್ಟ್ ಸಿಸ್ಟಂ (ಡಿಎಸ್ಎಸ್):

          ಇ-ಆಡಳಿತ ಕೇಂದ್ರ, ಇ-ಆಡಳಿತ ಇಲಾಖೆ ಇವರ ಸಹಯೋಗದೊಂದಿಗೆ ಯೋಜನಾ ಇಲಾಖೆಯು “ಡಿಸಿಷನ್ ಸಪೋರ್ಟ್ ಸಿಸ್ಟಂ” (ಸಮಗ್ರ ಮಾಹಿತಿ ನಿರ್ವಹಣಾ ವ್ಯವಸ್ಥೆ) ಅನ್ನು ಜಾರಿಗೆ ತರಲಾಗಿದೆ. ಇಲಾಖೆಗಳ ಪ್ರತಿಯೊಂದು ಯೋಜನೆಯ ಮಾಸಿಕ ಯೋಜನಾ ಕಾರ್ಯಕ್ರಮ, ಮಾಸಿಕ ಆರ್ಥಿಕ  ಸಾಧನೆಗಳನ್ನು ಕ್ಷೇತ್ರ ಮಟ್ಟದಿಂದ ಇಲಾಖಾ ಮುಖ್ಯಸ್ಥರ ಮಟ್ಟದವರೆಗೆ ಆನ್‌ಲೈನ್‌ನಲ್ಲಿ ದಾಖಲಿಸಲು “ಡಿಸಿಷನ್ ಸಪೋರ್ಟ್ ಸಿಸ್ಟಂ” ವ್ಯವಸ್ಥೆಯು ಸಹಾಯಕವಾಗಿದೆ. 

         

ಇತರೆ ಚಟುವಟಿಕೆಗಳು:

     (ಅ)    ಆರ್ಥಿಕ ಸಮೀಕ್ಷೆ ತಯಾರಿಕೆಗೆ ವಿವಿಧ ಇಲಾಖೆಗಳೊಂದಿಗೆ  ಈ  ವಿಭಾಗವು  ಸಮನ್ವಯ ಕಾರ್ಯ ಕೈಗೊಳ್ಳುತ್ತದೆ.  

    (ಆ)  ಸುಸ್ಥಿರ ಅಭಿವೃದ್ಧಿ ಗುರಿ-೧೩ಕ್ಕೆ ಸಂಬಂಧಿಸಿದಂತೆ, ಸಂಬಂಧಪಟ್ಟ ಇಲಾಖೆಗಳಾದ ಕೃಷಿ,  ತೋಟಗಾರಿಕೆ, ರೇಷ್ಮೆ,    ಪಶುಸಂಗೋಪನೆ, ಕಂದಾಯ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತç, ವಾಯು ಮಾಲಿನ್ಯ ನಿಯಂತ್ರಣ                   ಮಂಡಳಿ,  ನಗರಾಭಿವೃದ್ಧಿ, ವಾಣಿಜ್ಯ ಮತ್ತು ಕೈಗಾರಿಕೆ   ಇಲಾಖೆಗಳೊಂದಿಗೆ ಈ ವಿಭಾಗವು ಸಭೆಗಳನ್ನು ಆಯೋಜಿಸುವ     ಸಮನ್ವಯ ಕಾರ್ಯವನ್ನು  ಕೈಗೊಳ್ಳುವುದು.

ಇತ್ತೀಚಿನ ನವೀಕರಣ​ : 28-05-2019 01:09 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080