ಇಂಟರ್ನ್‌ಶಿಪ್

ಕರ್ನಾಟಕ ಸರ್ಕಾರವು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮತ್ತು ಜಿಲ್ಲೆಯ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಇಂಟರ್ನ್‌ಶಿಪ್ ಕಾರ್ಯಕ್ರಮವನ್ನು ಪರಿಚಯಿಸಿದೆ ಎಂದು ನಿಮಗೆ ತಿಳಿಸಲು ಸಂತೋಷವಾಗಿರುತ್ತದೆ.

 

ಅರ್ಜಿ ಸಲ್ಲಿಸುವ ಪ್ರಕ್ರಿಯೆ:

 

ಅರ್ಜಿಯನ್ನು ಸೇವಾ ಸಿಂಧು(ಆನ್‌ಲೈನ್, ಸೇವಾ ಸಿಂಧು ಕೇಂದ್ರಗಳು)ವಿನಲ್ಲಿ ಮಾತ್ರ ಸಲ್ಲಿಸಬೇಕು

 

  1. ಸೇವಾ ಸಿಂಧು ಪೋರ್ಟಲ್‌ಗೆ ಭೇಟಿ ನೀಡಿರಿ, ಮುಖ್ಯ ಮೆನುವಿನಲ್ಲಿ ಇಲಾಖೆ ಮತ್ತು ಸೇವೆಗಳ ಮೇಲೆ ಕ್ಲಿಕ್ ಮಾಡಿರಿ.
  2. ಪಟ್ಟಿಯಿಂದ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯನ್ನು ಆಯ್ಕೆಮಾಡಿರಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿರಿ.
  3. ಕರ್ನಾಟಕ ಸರ್ಕಾರದಲ್ಲಿ ಇಂಟರ್ನ್‌ಶಿಪ್ ಕಾರ್ಯಕ್ರಮಕ್ಕಾಗಿ ಅರ್ಜಿಯನ್ನು ಆಯ್ಕೆಮಾಡಿರಿ.
  4. ಅಗತ್ಯವಿರುವ ಲಗತ್ತುಗಳೊಂದಿಗೆ ಅರ್ಜಿಯನ್ನು ಸಲ್ಲಿಸಿರಿ.
  5. ಅರ್ಜಿದಾರರು ನಿರ್ದಿಷ್ಟ ಮಾರ್ಗಸೂಚಿಗಳ ಪ್ರಕಾರ, ಸೂಚನೆಗಳ ಪ್ರಕಾರ ಆನ್‌ಲೈನ್‌ನಲ್ಲಿ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು.

 

ಇಂಟರ್ನ್‍ಶಿಪ್‍ಗಾಗಿ ಅರ್ಜಿ

 

ಮಾರ್ಗಸೂಚಿಗಳು

 

**ವಿಶೇಷ ಸೂಚನೆ - ಇಂಟರ್ನ್ಶಿಪ್ ಕಾರ್ಯಕ್ರಮ

 

ಸೇವಾ ಸಿಂಧುದಲ್ಲಿ ನೋಂದಾಯಿಸುವುದು ಹೇಗೆ?

ಇತ್ತೀಚಿನ ನವೀಕರಣ​ : 30-04-2020 11:27 PM ಅನುಮೋದಕರು: Admin